ಕನ್ನಡದ ಸೃಜನಶೀಲ ಬರಹಗಾರರು, ಸಂಶೋಧಕರಾಗಿ ಗುರುತಿಸಿಕೊಂಡಿರುವ, ಚಲಪತಿಯವರು ಸೀನಿಯರ್ ಫೆಲೊ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮೈಸೂರು == ವೃತ್ತಿ == ಈಗ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ `ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ದಲ್ಲಿ ಸೀನಿಯರ್ ರೀಸರ್ಚ್ ಫೆಲೋ ಆಗಿ ಕೆಲಸ. ಈ ಮೊದಲು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳು ಮತ್ತು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳಿಗೂ ಸೇರಿದಂತೆ 22 ವರುಷಗಳ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಸಂಬಂಧದಲ್ಲಿ ಪಾಠ ಹೇಳಿದ ಅನುಭವ. == ಬಾಲ್ಯ ಮತ್ತು ಶಿಕ್ಷಣ == ಹುಟ್ಟಿದ್ದು 1965ರಲ್ಲಿ, ಬೆಂಗಳೂರು ಜಿಲ್ಲೆಯ ಯಲಹಂಕದ ಬಳಿಯ ಹಾರೋಹಳ್ಳಿಯಲ್ಲಿ. ಅಮ್ಮ-ಪಾರ್ವತಮ್ಮ. ಅಪ್ಪ-ರಾಮಯ್ಯ. ಅಲ್ಲಿನ ಸ್ಥಳೀಯ ಶಾಲೆ-ಕಾಲೇಜುಗಳಲ್ಲಿಯೇ ಪಿಯುಸಿವರೆಗಿನ ಕಲಿಕೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ. == ಕೃತಿಗಳು == ಕನ್ನಡ ನುಡಿ ಮತ್ತು ಸಾಹಿತ್ಯದ ನಂಟಿನ ಸಾಂಸ್ಕೃತಿಕ ಓದು-ಅಧ್ಯಯನಗಳಲ್ಲಿ ` ಸಾಹಿತ್ಯ ಮತ್ತು ಸಾಹಿತ್ಯದಾಚೆಗೆ-ಅಧಿಕಾರ ಚಲನೆಯ ಅನಧಿಕೃತ ವರಸೆಗಳು ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ ತಂತಿ ಮೇಲಿನ ನಡಿಗೆ-ಕಲಿಕೆಯ ಕನ್ನಡದ ಬಗೆಗೆ ಬಲ್ಲವರೊಂದಿಗೆ ಮಾತುಕತೆ ನುಡಿಯೊಡನೆ ನಮ್ಮದೇ ತಿಳಿವಿನ ದಾರಿಗಳಲ್ಲಿ-ಕನ್ನಡ ಬರವಣಿಗೆಯ ಚಹರೆಗಳಲ್ಲಿ ಬದುಕಿನ ಓದು ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಕಾರಣ ` ಕುವೆಂಪು ಬರಹಗಳ ಓದಿನ ರಾಜಕಾರಣ ` ಕನ್ನಡ ನುಡಿಯ ಆಕರಕೋಶ ರೈತ-ಕಾರ್ಮಿಕ ಓದು ಪ್ರಾಚೀನ ಕನ್ನಡ ಸಾಹಿತ್ಯ ಸಮಗ್ರ ಸೂಚಿ-1 ತೊಡಕುಗಳು ಮತ್ತು ತೋರುದಾರಿ ಕನ್ನಡ ಸಂಸ್ಕೃತಿಯ ಓದಿನ ಬಗೆಗಳು ಸಾಹಿತ್ಯ ಚರಿತ್ರೆಗಳ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಓದು. == ಉಲ್ಲೇಖ ==